News Cafe | PM Narendra Modi's Assets Come Down | HR Ranganath | Aug 10, 2022

2022-08-10 0

ಅಧಿಕಾರದಲ್ಲೀಗ ರಾಜಕಾರಣಿಗಳ ಆಸ್ತಿ ಏರಿಕೆ ಆಗೋದನ್ನ ಕೇಳಿದ್ವಿ... ನೋಡಿದ್ದೀವಿ. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿ 84 ಲಕ್ಷದಷ್ಟು ಇಳಿಕೆ ಆಗಿದೆ. 2021ರಲ್ಲಿ 3.22 ಕೋಟಿ ಇದ್ದ ಆಸ್ತಿ ಈಗ 2.23 ಕೋಟಿಗೆ ಇಳಿದಿದೆ. ಮೋದಿ ಮಾಡಿರುವ ಆಸ್ತಿ ಘೋಷಣೆ ಅನ್ವಯ, 2022ರ ಮಾರ್ಚ್ 31ಕ್ಕೆ ಅಂತ್ಯಗೊಂಡ ಅವಧಿಯಲ್ಲಿ ಅವರ ಕೈಯಲ್ಲಿ 35,250 ರೂ. ನಗದು, 1.89 ಲಕ್ಷ ಮೌಲ್ಯ ಜೀವ ವಿಮೆ, 9.5 ಲಕ್ಷ ಮೌಲ್ಯದ ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪತ್ರ, 1.73 ಲಕ್ಷ ರೂಪಾಯಿ ಬೆಲೆಬಾಳುವ 4 ಚಿನ್ನದ ಉಂಗುರ ಇದೆ. ಉಳಿದಂತೆ ಬ್ಯಾಂಕ್‍ನಲ್ಲಿನ ಠೇವಣಿಗಳನ್ನು ಹೊರತುಪಡಿಸಿದ್ರೆ ಅವರ ಬಳಿ ಷೇರು ಹೂಡಿಕೆ ಇಲ್ಲ, ಬಾಂಡ್, ಮ್ಯೂಚುವಲ್ ಫಂಡ್ ಯಾವೂದು ಇಲ್ಲ. ವೈಯಕ್ತಿಕ ವಾಹನವಂತೂ ಮೋದಿ ಅವರು ಹೊಂದಿಲ್ಲ.

#publictv #newscafe #hrranganath